ಡಾ: ಸಿಂಪಿ ಲಿಂಗಣ್ಣನವರ ಸಮಗ್ರ ಸಾಹಿತ್ಯ
ಜನಪದ ಸಾಹಿತ್ಯ
1 ಗರತಿಯ ಹಾಡು (1931): ಮಧುರ ಚೆನ್ನ, ಕಾಪಸೆ ರೇವಪ್ಪನವರೊಂದಿಗೆ ಸಿಂಪಿ ಲಿಂಗಣ್ಣನವರು ಸಂಗ್ರಹಿಸಿದ ಅಪ್ರತಿಮ ಅದ್ವಿತೀಯ ಜನಪದ ತ್ರಿಪದಿಗಳ ಸಂಗ್ರಹ2 ಜೀವನ ಸಂಗೀತ (1933): ಕಾಪಸೆ ರೇವಪ್ಪನವರೊಂದಿಗೆ ಸಿಂಪಿಲಿಂಗಣ್ಣನವರು ಸಂಗ್ರಹಿಸಿದ ಅಪೂರ್ವ ಲಾವಣಿಗಳ ಸಂಗ್ರಹ
3 ಉತ್ತರ ಕರ್ನಾಟಕ ಕರ್ನಾಟಕದ ಜನಪದ ಕಥೆಗಳು (1971): ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಸಿದ್ಧಪಡಿಸಿದ 73 ಉತ್ಕೃಷ್ಟ ಜನಪದ ಕಥೆಗಳ ಸಂಗ್ರಹ
4 ಗರತಿಯ ಬಾಳು (1954): ಸಿಂಪಿಲಿಂಗಣ್ಣನವರು ಗರತಿಯ ಹಾಡು ತ್ರಿಪದಿಗಳಿಗೆ ಬರೆದ ಸುಂದರ ವ್ಯಾಖ್ಯಾನ ಮೈಸೂರು ಸರಕಾರದಿಂದ ಬಹುಮಾನ ಪಡೆದ ಕೃತಿ
5 ಜನಾಂಗದ ಜೀವಾಳ (1957): ಜನಪದ ತ್ರಿಪದಿಗಳೊಂದಿಗೆ ಕಥೆಗಳು ಒಗಟುಗಳು ಬಯಲಾಟದ ಹಾಡುಗಳ ರಸವತ್ತಾದ ವಿಶ್ಲೇಷಣೆ ಮೈಸೂರು ಸರಕಾರದಿಂದ ಬಹುಮನ ಪಡೆದ ಕೃತಿ
6 ಉತ್ತರ ಕರ್ನಾಟಕದ ಜನಪದ ಗೀತೆಗಳು (1976): ಜನಪದ ಗೀತೆಗಳನ್ನು ಗಂಡಸರ ಹಾಡುಗಳು, ಹೆಂಗಸರ ಹಾಡುಗಳು, ಮಕ್ಕಳ ಹಾಡುಗಳೆಂದು ವಿಂಗಡಿಸಿ ವಿವೇಚಿಸಿದ ಪುಟ್ಟ ಪುಸ್ತಕ
7 ಜನಪದ ಸಾಹಿತ್ಯದಲ್ಲಿ ಕಿರಿದರೋಳ್ ಪಿರಿದರ್ಥ ಜನಪದ ಸಾಹಿತ್ಯ ಕುರಿತು ಸಣ್ಣ ಕೈಪಿಡಿ
8 ಲಾವಣಿಗಳು (1980): ಉತ್ತರ ಕರ್ನಾಟಕದ ಲಾವಣಿಗಳ ಕುರಿತ ಪುಟ್ಟ ವಿವೇಚನೆ
9 ಗರತಿಯ ಬಾಳ ಸಂಹಿತಿ (1985): ಗರತಿಯ ಹಾಡಿನಲ್ಲಿ ಬರುವ ತ್ರಿಪದಿಗಳ ಇನ್ನೊಂದು ಸುಂದರ ವ್ಯಾಖ್ಯಾನ
10 ಗಾದೆಗಳ ಗಾರುಡಿ (1988): ಜೀವನದ ಹುಟ್ಟಿನಿಂದ ಹಿಡಿದು ಬಡತನ, ಹೆಣ್ಣ ಮಕ್ಕಳ ಜೀವನದ ವಿಷಯಗಳ ಗುರಿತ ವಿರಾಟ ದರ್ಶನ
ಕವನ ಸಂಕಲನಗಳು
11 ಮಿಲನ (1936): ರಾಮನರೇಶ ತ್ರಿಪಾಠಿ ಅವರು ಬರೆದ ಹಿಂದಿ ಖಂಡ ಕಾವ್ಯದ ಕನ್ನಡಾನುವಾದ12 ಮುಗಿಲ ಜೇನು (1948): ಸಿಂಪಿ ಲಿಂಗಣ್ಣನವರ ಪ್ರಾತಿನಿಧಿಕ ಕವನ ಸಂಕಲನ
13 ಶ್ರುತಾಶ್ರುತ್ (1968): ಬಸವಣ್ಣನವರ ಕುರಿತ 63 ಕವನಗಳ ಸಂಕಲನ
14 ಸಾಯ್ಕೊಲ್ (1976): ಸ್ವಾತಂತ್ರ್ಯೊತ್ತರ ಭಾರತದ ಹಳ್ಳಿಗಳ ವಾಸ್ತವ ಚಿತ್ರಣ ಕೊಡುವ ಕವನ ಸಂಕಲನ
15 ಮಾತೃವಾಣಿ: ಪಾಂಡಿಚೇರಿಯ ಮಾತೆಯವರ ನುಡಿ ಮುತ್ತುಗಳಿಗೆ ಕವನ ರೂಪ ಕೊಟ್ಟಿದ್ದಾರೆ
16 ನಮಸ್ಕಾರ (1960): ಭಕ್ತಿ-ಭಾವದಿಂದ ತುಂಬಿದ ಗದ್ಯ ಗೀತಗಳ ಸಂಕಲನ
ಪ್ರಬಂಧ ಸಂಕಲನಗಳು
17 ಭಾರತೀಯ ಸಂಸ್ಕೃತಿಯ ಸಂಘಟನೆ (1968): ಭಾರತದ ಇತಿಹಾಸ ಸಂಸ್ಕೃತಿಗಳ ಸಿಂಹಾವಲೋಕನ18 ಬಾಳ ಬೇಸಾಯ (1962): ಕರ್ನಾಟಕ ಮಹಾಪುರುಷರು ಭಾರತೀಯ ಮಹಾಪುರುಷರೊಡನೆ ನಡೆಸಿದಿದ ಕಾಲ್ಪನಿಕ ಸಂಭಾಷಣೆ
ವೈಚಾರಿಕ ಪ್ರಬಂಧಗಳು
19ಜೀವನ ದೃಷ್ಟಿ: ಮಹಾಪುರುಷರ ಜೀವನದ ವಿಮಶರ್ೆ ವಿದ್ಯಾರಣ್ಯ ಹಾಗೂ ಬಸವಣ್ಣನವರನ್ನು ಅವರು ಕನ್ನಡದ ಎರಡು ಕಣ್ಣುಗಳೆಂದು ಕರೆದಿದ್ದಾರೆ.20 ಬದುಕಿನ ಬೆಲೆ: ಆಧ್ಯಾತ್ಮಿಕ ವಿಷಯಗಳ ಕುರಿತ ಪ್ರಬಂಧ ಸಂಕಲನ
21 ಬಾಳ ಬಟ್ಟೆ 1950: ಬಸವಣ್ನನವರ ಹಾಗು ಶ್ರೀ ಅರವಿಂದರ ವಿಚಾರಧಾರೆ ಈ ಪುಸ್ತಕದ ಹೂರಣವಾಗಿದೆ.
22 ಸ್ವರ್ಗದೋಲೆಗಳು (1950): ಕನ್ನಡ ನಾಡಿನ ಮಹಾಪುರುಷರು ಹಾಗೂ ಕವಿಗಳು ಇಂದಿನ ಕನ್ನಡಿಗರಿಗೆ ಸ್ವರ್ಗದಿಂದ ಪತ್ರ ಬರೆಯದರೋ ಎನ್ನುವಂತೆ ಬರೆದ ಕಾಲ್ಪನಿಕ ಪತ್ರಗಳ ಸಂಕಲನ
23 ಸನ್ಯಾಸಿ ದಿಬ್ಬ (1956): ಕನ್ನಡ ನಾಡಿನ ಪ್ರೇಕ್ಷಣೀಯ ಸ್ಥಳಗಳ ಕುರಿತ ರೂಪಕಗಳ ಸಂಗ್ರಹ
24 ಸಾಹಿತ್ಯ ಸಂಪರ್ಕ (1974): ಸಾಹಿತ್ಯಕ್ಕೆ ಸಂಬಂಧಿಸಿದಂತೆ ರತ್ನಾಕರವಣರ್ಿ ಹಾಗೂ ಹರಿಹರ ಮೊದಲಾದವರ ಕುರಿತ ರಸಭರಿತ ವಿವೇಚನೆ.
ಹರಟೆ ವಿಡಂಬನೆ ಹಾಗು ವ್ಯಕ್ತಿಚಿತ್ರಗಳು
25 ಅಸ್ತವ್ಯಸ್ತ (1961) : ಹಳ್ಳಿಯ ಜೀವನದ ಇಂದಿನ ಸ್ಥಿತಿಗಳ ಕುರಿತ ಸಂಭಾಷಣಾ ರೂಪದ ಹರಟೆಗಳ ಸಂಕಲನ26 ಮಕ್ಕಳಿವರೇನಮ್ಮ ? (1966): ಭಾರತದ ಹಳ್ಳಿಗಳ ಕುರಿತ ವಾಸ್ತವ ಚಿತ್ರಣ-ವಿಡಂಬನಾತ್ಮಕ ಗ್ರಂಥ
27 ದಿಟಡ್ಟಿಸಿನೊಡಿದರೆ: ಹಳ್ಳಿಯ ಹತ್ತು ಸಮಸ್ತಾರ ಕುರಿತ ವ್ಯಕ್ತಿಗಳ ಚಿತ್ರಗಳ ಸಂಕಲನ
28 ತಲೆಮಾರಿನ ಹಿಂದೆ (1968): ಹಿಂದಿನ ತಲೆಮಾರಿನ ಹಳ್ಳಿಯ ಜನರ ಸರಳ ಜೀವನದ ಸಜೀವ ಚಿತ್ರವಾಗಿದೆ.
29 ನಾಟ್ಯ ಸಾಧನೆ (1976): ಹಿಂದಿನ ಕಾಲದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಬಯಲಾಟಗಳ ರಮ್ಯ ಚಿತ್ರ ಈ ಪುಸ್ತಕದಲ್ಲಿ ದೊರೆಯುತ್ತದೆ.
30 ನೂರು ಗಡಿಗೆ ಒಂದು ಬಡಿಗೆ (1978): ಇಂದಿನ ಹಳ್ಳಿಗಳ ವಾಸ್ತವ ಚಿತ್ರವನ್ನು ಒದಗಿಸಿದ್ದಾರೆ ಭಾಷೆ ವ್ಯಂಗ್ಯ ವಿಡಂಬನಗಳಿಂದ ತುಂಬಿದೆ. ಈ ಪುಸ್ತಕದಲ್ಲಿ ಕೂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದಿದೆ.
ಜೀವನ ಚರಿತ್ರೆಗಳು
31 ಶ್ರೀ ಅರವಿಂದರು: ಶ್ರೀ ಅರವಿಂದರ ಬಾಲ್ಯ ಜೀವನದಿಂದ ಮೊದಲುಗೊಂಡು ಭೂಮಿಯ ಮೇಲಿನ ಅರೆ ಮಾನಸದ ಅವತರಣದವರೆಗಿನ ಅವರ ಸಮಗ್ರ ಜೀವನ ಚರಿತ್ರೆ32 ಹಳ್ಳಿಯ ಮಹಾತ್ಮ: ಇಂಡಿ ತಾಲ್ಲೂಕಿನ ಅಥಗರ್ಾ ಎಂಬ ಸಣ್ಣ ಹಳ್ಳಿಯ ಶಿಕ್ಷಕರಾಗಿದ್ದುಕೊಂಡು ಹಳ್ಳಿಗರಿಂದ ತನ್ನ ದೇವಾಲಯ ಕಟ್ಟ್ಪಿಸಿಕೊಂಡ ಶಿಕ್ಷಕರೊಬ್ಬರ ಕಥೆ.
33 ಪ್ರಿಯದಶರ್ಿ ಅಶೋಕ (1961): ಭಾರತದ ಪ್ರಜಾಸತ್ತೆಗೆ ಅಶೋಕನ ಜೀವನವೂ ಕಾರ್ಯಪದ್ಧತಿಯೂ ವಿಚಾರಧಾರೆಗಳೂ ಹೇಗೆ ಆದರ್ಶಪ್ರಾಯವಗಿವೆಯೆಂಬ ವಿಚಾರವನ್ನೊಳಗೊಂಡಿದೆ.
34 ಶ್ರೀ ಮಧುರಚೆನ್ನರ ಸ್ಮೃತಿಗಳು: ಶ್ರೀ ಮಧುರಚೆನ್ನರೊಂದಿಗೆ ತಮ್ಮ ಒಡನಾಟದ ಕಥೆಯೊಂದಿಗೆ ಹಲಸಂಗಿ ಗೆಳೆಯರ ಸಾಂಸ್ಕೃತಿಕ ಚಟುವಟಿಕೆಗಳ ಇತಿಹಾಸವನ್ನು ಸಿಂಪಿ ಲಿಂಗಣ್ಣನವರು ಬರೆದಿದ್ದಾರೆ
35 ಮಧುರಚೆನ್ನರ ಜೀವನ ಹಾಗೂ ಕಾರ್ಯ: ಈ ಗ್ರಂಥದಲ್ಲಿ ಮಧುರಚೆನ್ನರ ಆಂತರಂಗಿಕ ಹಾಗೂ ಲೌಕಿಕದ ಜೀವನಗಳನ್ನು ಸಮತೋಲನದಿಂದ ವಿವರಿಸಿದ್ದಾರೆ.
36 ಶ್ರೀ ತಾಯಿಯವರು (1963): ಪಾಂಡಿಚೇರಿಯ ಶ್ರೀ ಮಾತೆಯವರ ಜೀವನ ಹಾಗೂ ಸಂದೇಶಗಳನ್ನು ಅವರು ಜಗನ್ಮಾತೆಯ ಅವತಾರವೆಂದೂ ವಿವರಿಸಿದ್ದಾರೆ.
37 ಸುಪ್ರಮಾನಸದ ಶ್ರೀಮಾತೆ: ಪಾಂಡಿಚೇರಿಯ ಶ್ರೀ ಮಾತೆಯವರ ಜೀವನ ಹಾಗೂ ಸಾಧನೆಗಳನ್ನು ಈ ಗ್ರಂಥದಲ್ಲಿಯೂ ವಿವರಿಸಲಾಗಿದೆ.
38 ಬಾಳಿನಲ್ಲಿ ಬೆಳಕು (1931): ಟಾಲಸ್ಟಾಯ್ರ ಆತ್ಮಕಥೆ ಬಧುರಚೆನ್ನರ ಜೊತೆಗೂಡಿ ಕನ್ನಡಕ್ಕೆ ತಂದಿದ್ದಾರೆ.
39 ಕನ್ನಡಿಗರ ಕುಲಗುರು (1938): ಮಧುರಚೇನ್ನರ ಜೊತೆಗೂಡಿ ವಿದ್ಯಾರಣ್ಯರ ಕುರಿತು ಪುಸ್ತಕ ಬರೆದಿದ್ದಾರೆ
40 ದತ್ತ ಸಾಹಿತ್ಯ (1946): ಬೇಂದ್ರೆಯವರ ಜೀವನ ಹಾಗೂ ಸಾಧನೆಗಳ ಜೊತೆಗೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದ್ದಾರೆ.
41 ಕನ್ನಡ ಕುಲದೀಪ ಬಸವಣ್ಣನವರ ಜೀವನ (1957): ಬಸವಣ್ಣನವರ ಜೀವನ ಚರಿತ್ರೆಯನ್ನು ಅವರ ಜೀವನ ಸಂದೇಶವನ್ನೂ ಹೃದಯಂಗಮವಾಗಿ ನಿರೂಪಿಸಿದ್ದಾರೆ.
42 ವಿಶ್ವಕವಿ (1969): ಕವೀಂದ್ರ ರವೀಂದ್ರರ ಜೀವನ ಹಾಗೂ ಸಾಹಿತ್ಯಗಳ ಕಿರು ಪರಿಚಯವನ್ನೋಳಗೊಂಡಿದೆ
43 ಸಿಡಿಲು ಸನ್ಯಾಸಿ (1970): ವಿವೇಕಾನಂದರ ಜೀವನಚರಿತ್ರೆ ಮತ್ತೆ ಅವರನ್ನು ಶ್ರೀ ಅರವಿಂದರೊಂದಿಗೆ ಹಾಗೂ ಬುದ್ಧನೊಂದಿಗೆ ಹೋಲಿಸಲಾಗಿದೆ.
44 ಮಹತ್ಕಾಶಿಯ ಮಹಾಮನು (1971): ಸರ್ವ ಧರ್ಮಗಳಲ್ಲಿ ಸಮನ್ವಯ ಸಾಧಿಸಿದ ಶ್ರೀ ರಾಮಕೃಷ್ಣ ಪರಮ ಹಂಸರ ಆಧ್ಯಾತ್ಮಿಕ ಜೀವನದ ಒಳನೋಟ ಕೊಡುತ್ತಾರೆ.
45 ಮೂವತೈದು ವರ್ಷ: ಶಿಕ್ಷಕರಾಗಿ ತಾವು ಪಟ್ಟ ಅನುಭವಗಳನ್ನು ಈ ಆತ್ಮ ಚರಿತ್ರೆಯಲ್ಲಿ ಅಳವಡಿಸಿದ್ದಾರೆ
46 ಬಾಳ ಸಂಜೆಯ ಹಿನ್ನೋಟ: ಪುಸ್ತಕ ಪ್ರಾಧಿಕಾರ ಸಿಂಪಿಯವರ ಸಮಗ್ರ ಅತ್ಮಚರಿತ್ರೆಯನ್ನು ಪ್ರಕಟಿಸಿದೆ.
ಸಣ್ಣ ಕಥೆಗಳು ಹಾಗೂ ಕಾದಂಬರಿ
47 ಸುಂದರ ಕಥೆಗಳು (1960): ಶ್ರೀ ಅರವಿಂದಾಶ್ರಮದ ಮಹಾಮಾತೆಯವರ ಸಾಹಸ ಪ್ರಾಮಾಣಿಕತೆಗಳ ಮಹತ್ವ ವಿವರಿಸುವ ಸಣ್ಣಕಥೆಗಳ ಕನ್ನಡಾನುವಾದ48 ದೀಪವತರ್ (1970): ಶ್ರೀ ಅರವಿಂದರು ಬರೆದ ಎರಡು ಸಣ್ಣ ಕಥೆಗಳ ಕನ್ನಡಾನುವಾದ
49 ಸತ್ಯ ಕಥೆಗಳು (1992): ಉತ್ತರ ಕರ್ನಾಟಕದ ಹಿಂದಿನ ತಲೆಮಾರಿನಲ್ಲಿ ಆಗಿ ಹೋದ ಘಟನೆಗಳ ಸಣ್ಣ ಕಥೆಗಳ ರೂಪ
50 ಪವಿತ್ರ ಜೀವನ (1936): ಟಾಲ್ಸ್ಟಾಯ್ರ ವಿಶ್ವವಿಖ್ಯಾತ ಏಳು ಕವಿತೆಗಳ ಕನ್ನಡಾನುವಾದ
51 ಬೆಟ್ಟದ ಹೊಳೆ: ಕಾದಂಬರಿ, ಸಿಂಪಿಯವರ ಸ್ವಂತ ಜೀವವನ್ನಾಧರಿಸಿದ ಸುಂದರ ಕಾದಂಬರಿ
ಶ್ರೀ ರಾಮತಿರ್ಥರ ಸಾಹಿತ್ಯದ ಕನ್ನಡಾನುವಾದ
52 ರಾಮತೀರ್ಥರ ತೀರ್ಥ: ವಿವೇಕಾನಂದರ ಸಮಕಾಲೀನ ಸಂತ ರಾಮತೀರ್ಥತರ ಜೀವನ ಚರಿತ್ರೆ53 ಸುಖದ ನೆಲೆ (1962): ವೇದಾಂತದ ತತ್ವಗಳನ್ನೂ ಸರಳಭಾಷೆಯಲ್ಲಿ ಹೇಳಿದ ರಾಮತೀರ್ಥರ ಉಪನ್ಯಾಸಗಳ ಕನ್ನಡಾನುವಾದ.
54 ಮನೆಯಲ್ಲಿಯೇ ಮುಕ್ತಿಯ ದಾರಿ (1963): ಶಾಂತಿ ಸಮಾಧಾನಗಳಿಂದ ಕೂಡಿದ ಮನೆ ನಿರ್ಮಾಣ ಈ ಪುಸ್ತಕದ ತಿರುಳು
55 ಭಾರತ ಸಮಸ್ಯೆ (1968): ಭಾರತದ ಚಿರಂತನ ಸಮಸ್ಯೆಗಳಲ್ಲಿ ಇಲ್ಲಿ ಉತ್ತರ ಕೊಡಲಾಗಿದೆ.
56ಬಿಚ್ಚು ಮೊಗ್ಗೆ (1968) : ರಾಮತೀರ್ಥರು ತಮ್ಮ ಉಪನ್ಯಾಸಗಳಲ್ಲಿ ಹೇಳುತಿದ್ದ ದೃಷ್ಠಾಂತ ಕತೆಗಳ ಕನ್ನಡಾನುವಾದ
57 ರಾಮತೀರ್ಥರ ಪತ್ರಗಳು (1981): ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಗುರುಗಳಿಗೆ ರಾಮತೀರ್ಥರು ಬರೆದ ಪತ್ರಗಳ ಕನ್ನಡಾನುವಾದ
ಮಕ್ಕಳ ಸಾಹಿತ್ಯ
58 ವಿಶ್ವಾಮಿತ್ರನ ಸಾಹಸ (1942): ಮಕ್ಕಳಿಗಾಗಿ ಸಿಂಪಿಯವರು ಬರೆದ ವಿಶ್ವಾಮಿತ್ರನ ಕಥೆ.59 ಕಿರು ಗನ್ನಡಿ (1946): ಕನ್ನಡವ್ಯಾಕರಣದ ಪ್ರಾಥಮಿಕ ತಿಳುವಳಿಕೆ ಮಾಡಿಕೊಡುವ ಸಣ್ಣ ಪುಸ್ತಕ
60 ಲೋಬೋ ಲೋಬೋ (1940): ಅಂದಿನ ವಿಜಾಪೂರ ಜಿಲ್ಲೆಯ ಲೋಕಲ್ ಬೋಡರ್ಿನ ಭ್ರಷ್ಠ ಕಥೆ.
61 ಭಗವಾನ್ ಬುದ್ದದೇವ (1949): ಬುದ್ದನ ಜೀವನ ಸಂದೇಶವನ್ನು ಮಕ್ಕಳೀಗಾಗಿ ಹೇಳಿದ ಪುಸ್ತಕ.
62 ಕವಿ ಮತ್ತು ಕವಿತೆ (1949): ಕವಿತೆ ಎಂದರೇನು ಎಂಬ ವಿಷಯವನ್ನು ಮಕ್ಕಳಿಗಾಗಿ ತಿಳಿಸಿದ್ದಾರೆ.
63 ತಿರುವಲ್ಲುವರ (1950): ತಮಿಳುನಾಡಿನ ಸಂತನ ಕತೆಯನ್ನು ಮಕ್ಕಳಿಗಾಗಿ ಹೇಳಿದ್ದಾರೆ.
64 ಮಕ್ಕಳ ಶ್ರೀ ಅರವಿಂದರು: ಮಕ್ಕಳಿಗಾಗಿ ಜೀವನ ಚರಿತ್ರೆಯನ್ನು ಸರಳಭಾಷೆಯಲ್ಲಿ ಹೇಳಲಾಗಿದೆ.
65 ಗುರುಲಿಂಗ ಜಂಗಮ ಮಹಾರಾಜರು: ನಿಂಬಾಳದ ಸಂತ ರಾನಡೆಯವರ ಗುರುಗಳ ಕತೆ.
66 ಶ್ರೀ ಅರವಿಂದರು (1979): ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಮಕ್ಕಳಿಗಾಗಿ ಜೀವನ ಕಥೆ ಹೇಳಿದ್ದಾರೆ.
67 ನಾಮದೇವ (1979): ಮಹಾರಾಷ್ಟ್ರದ ಸಂತ ನಾಮದೇವನ ಕಥೆಯನ್ನು ಮಕ್ಕಳಿಗಾಗಿ ಬರೆದಿದ್ದಾರೆ.
68 ಹಾವಿನಾಳ ಕಲ್ಲಯ್ಯ (1980): ಹಾವಿನಾಳ ಕಲ್ಲಯ್ಯನವರ ಕಥೆಯನ್ನು ಮಕ್ಕಳಿಗಾಗಿ ರಚಿಸಿದ್ದಾರೆ.
69 ಹರಿಜನೋದ್ದಾರ (1950): ಹರಿಜನೋದ್ದಾರ ವಿಷಯವನ್ನು ಮಕ್ಕಳಿಗೆ ತಿಳಿಸಿದ್ದಾರೆ.
70 ಅಕ್ಕ ತಂಗಿಯರಿಗಾಗಿ (1954): ಹೆಣ್ಣುಮಕ್ಕಳು ತಮ್ಮ ಜೀವನ ಹೇಗೆ ಸಾಗಿಸಬೇಕೆಂಬುದರ ವಿವರಣೆ ಶ್ರೀ ಅರವಿಂದರ ಸಾಹಿತ್ಯದ ಕನ್ನಡಾನುವಾದ
71 ಧರ್ಮಕ್ಷೇತ್ರೆ ಕುರುಕ್ಷೇತ್ರೆ: ಮಧುರಚೆನ್ನರ ಜೊತೆಗೂಡಿ ಎರಡನೇ ಮಹಾಯುದ್ಧದ ವಿಷಯ ಈ ಪುಸ್ತಕದ ತಿರುಳಾಗಿದೆ.
72 ಪೂರ್ಣ ಯೋಗದ ಜೀವಾಳ: ಶ್ರೀ ಅರವಿಂದರ ಪೂರ್ಣಯೋಗದ ಸಾರಾಂಶ ಈ ಪುಸ್ತಕದಲ್ಲಿದೆ.
73 ಶ್ರೀ ತಾಯಿಯವರ ಹೊಸ ಪ್ರವಚನಗಳು: ಶ್ರೀ ಅರವಿಂದಾಶ್ರಮದ ತಮ್ಮ ಶಿಷ್ಯರಿಗೆ ಹೇಳಿದ ಪ್ರವಚನಗಳ ಕನ್ನಡಾನುವಾದ.
74 ಯೋಗದೀಕ್ಷೆ: ಪೂರ್ಣ ಯೋಗದ ಪರಿಚಯ ಕೊಡುವ ಗ್ರಂಥ.
75 ಉತ್ತರಪಾಡಾ ಉಪನ್ಯಾಸ: ಶ್ರೀ ಅರವಿಂದರ ಐತಿಹಾಸಿಕ ಪ್ರಸಿದ್ದ ಉಪನ್ಯಾಸದ ಕನ್ನಡಾನುವಾದ.
76ಶ್ರೀ ಅರವಿಂದರ ಪತ್ರಗಳು: ಶ್ರೀ ಅರವಿಂದರು ತಮ್ಮ ಪತ್ರಿಕೆಗೆ ಬರೆದ ಪತ್ರಗಳ ಕನ್ನಡಾನುವಾದ
77 ಗೀತೆಯ ಭೂಮಿಕೆ (1970): ಶ್ರೀ ಅರವಿಂದರು ಗೀತೆಯ ಬಗ್ಗೆ ಬರೆದ ವಾದ ಪುಸ್ತಕದ ಕನ್ನಡಾನುವಾದ.
78 ಧರ್ಮ ಹಾಗೂ ರಾಷ್ಟ್ರೀಯತೆ (2010): ಶ್ರೀ ಅರವಿಂದರ ಕೆಲ ಪ್ರಬಂಧಗಳ ಕನ್ನಡಾನುವಾದ.
79 ಪೂರ್ಣ ಯೋಗ (2010): ಶ್ರೀ ಅರವಿಂದರ ಕನ್ನಡಾನುವಾದ ಈ ವರ್ಷ ಮರು ಮುದ್ರಣಗೊಂಡಿದೆ.